ಕಾಪ್ರಿಕ್ ಆಮ್ಲ ಎನ್ನುವುದು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಕೊಬ್ಬಿನ ಆಮ್ಲಗಳು ಒಂದು ತರಹದ ವೋನೋಕಾರ್ಬೋಕ್ಸಿಲಿಕ್ ಆಮ್ಲಗಳು, ಕೊಬ್ಬಿನ ಆಮ್ಲಗಳು ಹೈಡ್ರೋಕಾರ್ಬನ್ ಪರಮಾಣುಗಳ ಸಂಯೋಗದಿಂದ ಒಂದು ಸರಪಳಿ ಆಕಾರದಲ್ಲಿ ನಿರ್ಮಾಣವಾಗಿರುತ್ತವೆ. ಆಮ್ಲದ ಸರಪಳಿ ಒಂದಂಚಿನಲ್ಲಿ ಕಾರ್ಬೋಕ್ಸಿಲ್()ಸಮೂಹ ಇದ್ದು, ಎರಡನೆ ಕೊನೆಯಲ್ಲಿ ಮಿಥೈಲ್(CH3)ಸಮೂಹವಿರುತ್ತದೆ. ಕಾಪ್ರಿಕ್ ಆಮ್ಲದ ಹೈಡ್ರೋಕಾರ್ಬನ್ ಸರಪಳಿ ಮಧ್ಯಸ್ತವಾಗಿ ಉದ್ದವಾಗಿರುತ್ತದೆ. ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ೧೦ ಕಾರ್ಬನ್ ಗಳನ್ನು ಹೊಂದಿರುವ ಕಾಪ್ರಿಕ್ ಆಮ್ಲ ಟ್ರಗ್ಲಿಜರಾಯಿಡ್ ರೂಪದಲ್ಲಿ ಮೇಕೆಯ ಹಾಲಿನ ಕೊಬ್ಬಿನಲ್ಲಿ ಇರುತ್ತದೆ == ಕಾಪ್ರಿಕ್ ಆಮ್ಲದ ರಚನೆ == ಕಾಪ್ರಿಕ್ ಆಮ್ಲ ಎನ್ನುವುದು ಮಧ್ಯಸ್ಥವಾದ ಉದ್ದವಾಗಿರುವ ಹೈಡ್ರೋಕಾರ್ಬನ್ ಸರಪಳಿಯಂತಹ, ೧೦ ಕಾರ್ಬನ್ ಗಳಿರುವ ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಇದು ಒಂದು ಕಾರ್ಬೋಕ್ಸಿಲಿಕ್ ಆಮ್ಲವಾಗಿದೆ. ಇದನ್ನು ಅಲಿಫಾಟಿಕ್()ಆಮ್ಲವೆಂದು ಕರೆಯಲಾಗುತ್ತದೆ. ಹಸು () ಮತ್ತು ಮೇಕೆ ಹಾಲಿನಲ್ಲಿ ಹೆಚ್ಚಾಗಿ ಈ ಕೊಬ್ಬಿನ ಆಮ್ಲವು ಕಂಡುಬರುತ್ತದೆ . ಈ ಆಮ್ಲವನ್ನು ಶಾಸ್ತ್ರೀಯವಾಗಿ ಹೆಕ್ಸಾನೋಯಿಕ್ ಆಮ್ಲ( )ವೆಂದು ಕರೆಯಲಾಗುತ್ತದೆ. ಆಮ್ಲಾಣುವಿನಲ್ಲಿ ೧೦ ಕಾರ್ಬನ್ , ೨೦ ಹೈಡ್ರೋಜನ್, ೨ ಆಕ್ಸಿಜನ್ ಪರಮಾಣುಗಳಿರುತ್ತವೆ. ಇದರ ಅಣು ಸಂಕೇತ ಸೂತ್ರ: C9H19COOH,ಮತ್ತೊಂದು ಅಣು ಫಾರ್ಮುಲ ಹೀಗಿರುತ್ತದೆ:C10H20O2. == ಉಪಯೋಗಗಳು == ಕಾಪ್ರಿಕ್ ಆಮ್ಲವು ಅಂಟಿ ವೈರಲ್()ಮತ್ತು ಅಂಟಿ ಮೈಕ್ರೋಬೈಯಲ್()ಗುಣಗಳನ್ನು ಹೊಂದಿದೆ.ದೇಹದ ಹೆಚ್ಚಿನ ಭಾರವನ್ನು ಕಡಿಮೆ ಮಾಡುತ್ತದೆ. ದೇಹ ವ್ಯವಸ್ಥೆಯ ಸಕ್ಕರೆ ಮಟ್ಟವನ್ನು( ) ನಿಯಂತ್ರಣ ಮಾಡುವುದರಲ್ಲಿ, , ಇನ್ನೂ ಗಳನ್ನು ನಿಯಂತ್ರಣದಲ್ಲಿಡುವುದಕ್ಕೆ ಸಹಾಯವಾಗುತ್ತದೆ == ಇವನ್ನೂ ನೋಡಿ == ಕೊಬ್ಬಿನ ಆಮ್ಲ ಪರ್ಯಾಪ್ತ ಕೊಬ್ಬಿನ ಆಮ್ಲ ಎಣ್ಣೆ == ಬಾಹ್ಯಾ ಕೊಂಡಿಗಳು == ://..//475060----/ ://.naturalhealth365.//- == ಉಲ್ಲೇಖನಗಳು ==